Followers

Followers somaling m uppar

Sunday, December 29, 2024

ಪ್ರಯತ್ನಿಸಿ

ಸೋಮಲಿಂಗ್ ಉಪ್ಪಾರ್  ಅವರು ಎಲ್ಲಾ ಮೀಡಿಯಾಗಳಲ್ಲಿ ಸಕ್ರಿಯರಾಗಿ ಕಾರ್ಯನಿರ್ವಹಿಸಿದ್ದಾರೆ ಅವರೆಲ್ಲ ಲಿಂಕ್ ಗಳಿಗಾಗಿ ಕೆಳಗಿನವುಗಳನ್ನು ಸಂಪರ್ಕಿಸಬಹುದು

https://t.me/kestkannada

2 K set examination📲
Kset full information
https://t.me/kestkannada

https://t.me/somalingmuppar

4  https://t.me/bcwdkalaburagi

5 ಗ್ರಾಮ ಪಂಚಾಯತಿ ಕವಲಗಾ
Kawalga in Aland taluk kalaburagi district
https://t.me/Grampanchayatkawalga

6 ಸೋಮು ಮಾಹಿತಿ ವೇದಿಕೆ
ಕನ್ನಡದಲ್ಲಿ
https://t.me/somalingmuppa

7. https://kawalgasomu.blogspot.com/?m=1

https://somalingmuppar76.blogspot.com/?m=1&zx=8ea9acdcb00f4100

http://somalingmuppark76.blogspot.com/?m=1


10 https://bcwdhostel.blogspot.com/?m=1

11 http://upparcommunitykar.blogspot.com/

12 https://youtube.com/channel/UCPJZtsdMQ_Zx9a9kqNx3nnQ

13 https://youtube.com/c/somalinguppar9008032272

Sunday, December 15, 2024

ಬಾಳೆಹಣ್ಣಿನ ಪಡ್ಡು ಸಿಹಿ-ಸಿಹಿಯಾಗಿ ತುಂಬಾನೇ ರುಚಿಯಾಗಿರುತ್ತದೆ


ಬಾಳೆಹಣ್ಣಿನ ಪಡ್ಡು ಸಿಹಿ-ಸಿಹಿಯಾಗಿ ತುಂಬಾನೇ ರುಚಿಯಾಗಿರುತ್ತದೆ, ಅಲ್ಲದೆ ಪಡ್ಡು ತಂಬಾ ಮೃದುವಾಗಿದ್ದು ಬಾಯಲ್ಲಿ ಇಟ್ಟರೆ ಕರಗುವಂತಿರುತ್ತದೆ, ಈ ಬಾಳೆಹಣ್ಣಿನ ಪಡ್ಡು ಮಾಡುವುದು ಸುಲಭದ ವಿಧಾನ ಅಲ್ಲದೆ ಇದನ್ನು ರೆಡಿ ಮಾಡಿ ವಾರದವರೆಗೆ ಇಡಬಹುದು, ಸಂಜೆ ಮಕ್ಕಳಿಗೆ ಇದನ್ನು ಮಾಡಿ ಕೊಟ್ಟರೆ ಚೆನ್ನಾಗಿರುವುದರಿಂದ ಇಷ್ಟಪಟ್ಟು ತಿಂತಾರೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

Banana Paddu
ಬೇಕಾಗುವ ಸಾಮಗ್ರಿ
ಅಕ್ಕಿಹಿಟ್ಟು1 ಕಪ್‌
100 ಗ್ರಾಂ ಬೆಲ್ಲ
ಒಂದು ಕಪ್ ನೀರು
ಹಣ್ಣಾದ ಬಾಳೆಹಣ್ಣು 3
ಸ್ವಲ್ಪ ತೆಂಗಿನ ತುರಿ

2-3 ಚಮಚ ತುಪ್ಪ
ಸ್ವಲ್ಪ ರೋಸ್ಟ್‌ ಮಾಡಿದ ಬಿಳಿ ಎಳ್ಳು
1/2 ಚಮಚ ಏಲಕ್ಕಿ ಪುಡಿ
1/4 ಚಮಚ ಜೀರಿಗೆ ಪುಡಿ

ಮಾಡುವ ವಿಧಾನ
ನೀವು ಬೆಲ್ಲವನ್ನು ತುರಿಯಿರಿ, ಅದನ್ನು ಬೌಲ್‌ಗೆ ಹಾಕಿ, ಬೆಲ್ಲದ ಅಚ್ಚು ಬದಲಿಗೆ ಬೆಲ್ಲದ ಪುಡಿ ಬಳಸಬಹುದು
ನಂತರ ಬೌಲ್‌ಗೆ ಒಂದು ಕಪ್‌ ನೀರು ಹಾಕಿ ಕಲೆಸಿ
ನಂತರ ಕಾಯಿಸಿ ಬೆಲ್ಲದ ಪಾಕ ತಯಾರಿಸಿ
ಉರಿಂದ ಇಳಿಸಿ ತಣ್ಣಗಾಗಲು ಬಿಡಿ
ನಂತರ ಅಕ್ಕಿಹಿಟ್ಟು, ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ
ಬಾಳೆಹಣ್ಣು ಮ್ಯಾಶ್‌ ಮಾಡಿ ಮಿಕ್ಸ್ ಮಾಡಿ, ಬಳಿಕ ತುಪ್ಪ ಸೇರಿಸಿ ಮಿಕ್ಸ್ ಮಾಡಿ. ಏಲಕ್ಕಿ ಪುಡಿ, ಜೀರಿಗೆ ಪುಡಿ ಸೇರಿಸಿ ಮಿಕ್ಸ್
ಈಗ ಪಡ್ಡು ತವಾಗೆ ತುಪ್ಪ ಸವರಿ ನಂತರ ಪಡ್ಡು ತವಾ ಬಿಸಿ ಮಾಡಿ ಅದರಲ್ಲಿ ಹಿಟ್ಟು ಹಾಕಿ ಬೇಯಸಿ.

ಇತರ ಸಲಹೆ: ಮೊದಲಿಗೆ ನೀರು ತುಂಬಾ ಹಾಕಬೇಡಿ, ಒಂದು ವೇಳೆ ಹಿಟ್ಟು ಗಟ್ಟಿಯಾದರೆ ನೀವು ನೀರುಸೇರಿಸಬಹುದು
ತೆಂಗಿನ ತುರಿ ಹಾಕಬಹುದು ಅಥವಾ ತೆಂಗಿನಕಾಯಿ ಕತ್ತರಿಸಿ ಅದನ್ನು ತುಪ್ಪದಲ್ಲಿ ಸ್ವಲ್ಪ ಹುರಿದು ನಂತರ ಸೇರಿಸಬಹುದು.
ಇದಕ್ಕೆ ಅಡುಗೆ ಸೋಡಾ ಬೇಕಾದರೆ ಸೇರಿಸಬಹುದು
ಬಾಳೆಹಣ್ಣು ತುಂಬಾ ಹಣ್ಣಾಗಿದ್ದರೆ ಇನ್ನೂ ರುಚಿ

ನೀವು ತವಾಗೆ ತುಪ್ಪಕ್ಕಿಂತ ಎಣ್ಣೆ ಸವರಿದರೆ ಅದು ಸುಲಭವಾಗಿ ಕಲ್ಲಿಂದ ತೆಗಿಯಬಹುದು, ಎರಡೂ ಬದಿ ಚೆನ್ನಾಗಿ ಬೇಯಿಸಿ.
ಇದಕ್ಕೆ ಬೇಕಿದ್ದರೆ ಡ್ರೈ ಫ್ರೂಟ್ಸ್‌ ಕೂಡ ಸೇರಿಸಬಹುದು, ಒಣ ಅಂಜೂರ, ಪಿಸ್ತಾ, ಗೋಡಂಬಿ ಇವುಗಳನ್ನು ಸೇರಿಸಬಹುದು.
ನೀವು ಈ ಪಡ್ಡು ಮಾಡಿ ವಾರದವರೆಗೆ ಇಡಬಹುದು
ಮಕ್ಕಳಿಗೆ ಈ ಪಡ್ಡು ಮಾಡಿ ನೀಡುವುದರಿಂದ ಅವರು ಇಷ್ಟಪಟ್ಟು ತಿಂತಾರೆ, ಪೋಷಕಾಂಶದ ಆಹಾರ ಹೊಟ್ಟೆ ಸೇರುತ್ತದೆ.
ಮಧುಮೇಹಿಗಳು ಈ ಪಡ್ಡು ಬೆಲ್ಲ ಸ್ಕಿಪ್‌ ಮಾಡಿ ಅಥವಾ ಸ್ವಲ್ಪವೇ ಬೆಲ್ಲ ಸೇರಿಸಿ ಮಾಡಿ ಸವಿಯಬಹುದು. ಈ ಪಡ್ಡು ಮಿತಿಯಲ್ಲಿ ತಿಂದರೆ ಯಾವುದೇ ತೊಂದರೆಯಿಲ್ಲ.

[ of 5 - Users]
 

Friday, December 13, 2024

ಈ 2024ನೇ ವರ್ಷ ಮುಗಿಯಲು ಕೆಲವು ದಿನಗಳಷ್ಟೇ ಬಾಕಿ ಇದೆ. ಹೊಸ ವರ್ಷ 2025ರಲ್ಲಿ ಹೊಸ ಸಂಕಲ್ಪಗಳನ್ನು ಕೈಗೊಳ್ಳಬೇಕು. ಹೆಚ್ಚು ಹಣವನ್ನು ಸಂಪಾದಿಸಬೇಕು, ಹೆಚ್ಚು ಸ್ಥಿತಿವಂತನಾಗಬೇಕು. ಇದಕ್ಕಾಗಿ ಚೆನ್ನಾಗಿ ದುಡಿದು, ಗಳಿಸಿ, ಇನ್ವೆಸ್ಟ್‌ ಮಾಡಬೇಕು ಎಂಬ ಗುರಿ ನಿಮ್ಮಲ್ಲಿ ಉಂಟಾಗಿರಬಹುದು.


ಈ 2024ನೇ ವರ್ಷ ಮುಗಿಯಲು ಕೆಲವು ದಿನಗಳಷ್ಟೇ ಬಾಕಿ ಇದೆ. ಹೊಸ ವರ್ಷ 2025ರಲ್ಲಿ ಹೊಸ ಸಂಕಲ್ಪಗಳನ್ನು ಕೈಗೊಳ್ಳಬೇಕು. ಹೆಚ್ಚು ಹಣವನ್ನು ಸಂಪಾದಿಸಬೇಕು, ಹೆಚ್ಚು ಸ್ಥಿತಿವಂತನಾಗಬೇಕು. ಇದಕ್ಕಾಗಿ ಚೆನ್ನಾಗಿ ದುಡಿದು, ಗಳಿಸಿ, ಇನ್ವೆಸ್ಟ್‌ ಮಾಡಬೇಕು ಎಂಬ ಗುರಿ ನಿಮ್ಮಲ್ಲಿ ಉಂಟಾಗಿರಬಹುದು.


A penny saved is a penny earned ಎಂಬ ಮಾತಿದೆ. ಅಂದರೆ ನೀವು ಉಳಿತಾಯ ಮಾಡುವ ಒಂದು ಪೈಸೆಯೂ, ಒಂದು ಪೈಸೆ ಸಂಪಾದಿಸಿದ್ದಕಕೆ ಸಮಾನ. ಈಗ ಒಂದು ಪೈಸೆ, ಒಂದು ರೂಪಾಯಿಗೆ ಮೌಲ್ಯ ಇಲ್ಲವೇ ಇಲ್ಲ ಎನ್ನುವಷ್ಟು ಸವಕಳಿಯಾಗಿರುವುದರಿಂದ, ಉಳಿತಾಯ ಮಾಡುವ ಪ್ರತಿ ಒಂದು ಲಕ್ಷ ರೂಪಾಯಿಯೂ, ಮತ್ತೊಂದು ಲಕ್ಷ ರೂ. ಗಳಿಸಿದ್ದಕ್ಕೆ ಸಮ ಎಂದು ಬದಲಾಯಿಸಿಕೊಳ್ಳಬಹುದು. ಆದರೆ

ಜೀವನದಲ್ಲಿ ನೀವು ಹಣ ಗಳಿಸುವುದಷ್ಟೇ ಮುಖ್ಯವಾಗುವುದಿಲ್ಲ. ಗಳಿಸಿದ ಹಣವನ್ನು ಉಳಿತಾಯ ಮಾಡುವುದು, ಬಳಿಕ ಸೂಕ್ತ ರೀತಿಯಲ್ಲಿ ಹೂಡಿಕೆ ಮಾಡುವುದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಇಲ್ಲದಿದ್ದರೆ, ನೀವು ಕೋಟಿ ಗಳಿಸಿದರೂ, ಅದನ್ನು ಉಳಿಸಲಾರಿರಿ ಎಂಬ ಸಂದೇಶವನ್ನು ಇದು ತಿಳಿಸುತ್ತದೆ.


ಇದಕ್ಕೊಂದು ‌ಮನ ಕಲಕುವ ಉದಾಹರಣೆಯನ್ನು ನಾವು ಸ್ಮರಿಸಿಕೊಳ್ಳಲೇಬೇಕು. ಏಕೆಂದರೆ ಇದರಿಂದ ಎಲ್ಲರೂ ಕಲಿಯಬಹುದಾದ ಪಾಠ ದೊಡ್ಡದು.


14 ವರ್ಷಗಳ ಹಿಂದೆ, ಅಂದರೆ 2011ರಲ್ಲಿ ಬಿಹಾರ ಮೂಲದ ಸುಶೀಲ್‌ ಕುಮಾರ್‌ ಎಂಬ ಹುಡುಗನೊಬ್ಬ, ಅಮಿತಾಭ್‌ ಬಚ್ಚನ್‌ ಅವರು ನಡೆಸಿಕೊಡುವ ಕೌನ್ ಬನೇಗಾ ಕರೋಡ್‌ಪತಿ ಸರಣಿಯಲ್ಲಿ ಬರೋಬ್ಬರಿ 5 ಕೋಟಿ ರೂ. ಗೆದ್ದು ರಾತ್ರೋರಾತ್ರಿ ದೇಶದಲ್ಲೇ ಮನೆ ಮಾತಾಗಿದ್ದ. ಪ್ರತಿಭಾವಂತನಾಗಿದ್ದ ಸುಶೀಲ್‌ ಕುಮಾರ್‌ಗೆ ದುರದೃಷ್ಟವಶಾತ್‌ ಅಷ್ಟೊಂದು ಹಣವನ್ನು ಹೇಗೆ ನಿರ್ವಹಿಸಬೇಕು ಎಂಬುದು ಗೊತ್ತಿರಲಿಲ್ಲ. ಊರಿನಲ್ಲಿ ಬಂಧುಗಳು, ಸ್ನೇಹಿತರೆಲ್ಲ ಸುತ್ತುವರಿದರು. ಆರಂಭದ ದಿನಗಳ ವಿಜಯೋತ್ಸವ, ಮಾನ-ಸಮ್ಮಾನಗಳು ನಡೆದವು. ಜತೆಗೆ ಸುಶೀಲ್‌ ಕುಮಾರ್‌, ಕೋಟಿಗಟ್ಟಲೆ ದುಡ್ಡನ್ನು ಬೇಕಾಬಿಟ್ಟಿಯಾಗಿ ಖರ್ಚು ಮಾಡಿದರು. ಜತೆಗೆ ಹಲವು ನಯವಂಚಕರೂ ಯಾಮಾರಿಸಿದರು. ಪ್ರತಿಭಾವಂತನಾಗಿದ್ದರೂ, ವೈಯಕ್ತಿಕ ಹಣಕಾಸು ವಿಚಾರಗಳಲ್ಲಿ ಸುಶೀಲ್‌ ಕುಮಾರ್‌ ಹಿಂದುಳಿದಿದ್ದರು. ಹೀಗಾಗಿ ಒತ್ತಡಕ್ಕೆ ಸಿಲುಕಿದ ಯುವಕ ಖಿನ್ನತೆಗೆ ಜಾರಿದ. ಕುಡಿತದ ವ್ಯಸನವೂ ವೈಯಕ್ತಿಕ ಜೀವನಕ್ಕೆ ಸಮಸ್ಯೆಯಾಯಿತು. ಕ್ರಮೇಣ ಸುಶೀಲ್‌ ಕುಮಾರ್‌ ಐದು ಕೋಟಿಯನ್ನೂ ಕಳೆದುಕೊಂಡು ದಿವಾಳಿಯಾದ. ಜೀವನ ನಿರ್ವಹಣೆಗೆ ಹಾಲು ಮಾರಾಟ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದ ಬಗ್ಗೆಯೂ ಸುದ್ದಿಯಾಯಿತು.


ಇತ್ತೀಚಿನ ವರ್ತಮಾನದ ಪ್ರಕಾರ, ಸುಶೀಲ್‌ ಕುಮಾರ್‌ ಹಳಿ ತಪ್ಪಿದ ಬದುಕನ್ನು ಸರಿಪಡಿಸುವ ನಿಟ್ಟಿನಲ್ಲಿ ಸುಧಾರಣೆಯಾಗುತ್ತಿದ್ದಾರೆ. ಬಿಹಾರದ ಸಾರ್ವಜನಿಕ ಸೇವಾ ಆಯೋಗದ ಪರೀಕ್ಷೆಯಲ್ಲಿ ಪಾಸಾಗಿ ಈಗ ಹೈ ಸ್ಕೂಲ್‌ ಶಿಕ್ಷಕರಾಗಿ ಪರಿವರ್ತನೆಯಾಗಿದ್ದಾರೆ. ತನ್ನ ಸ್ವಂತ ಖರ್ಚಿನಲ್ಲಿ ಶಾಲೆಗೆ ಲೈಬ್ರೆರಿಯನ್ನು ಕಟ್ಟಿಸಿದ್ದಾರೆ.

ಸುಶೀಲ್‌ ಕುಮಾರ್‌ ಅವರ ಈ ಕಥೆ, ಉಳಿತಾಯದ ಮಹತ್ವವನ್ನು ತಿಳಿಸುತ್ತದೆ.


ಉಳಿತಾಯ ಮಾಡುವ ಸಂಕಲ್ಪ ತೊಟ್ಟ ಬಳಿಕ ಖರ್ಚುಗಳನ್ನು ಕಡಿಮೆ ಮಾಡಲು ನಮ್ಮ ಮುಂದಿರುವ ಉತ್ತಮ ಅವಕಾಶಗಳನ್ನು ಗಮನಿಸಬೇಕು. ಹಣಕಾಸು ಜಾಗೃತಿಯ ಮೊದಲ ಹೆಜ್ಜೆಯೇ ನಿಮ್ಮ ಖರ್ಚುಗಳ ಮೇಲೆ ನಿಗಾ ವಹಿಸುವುದು. ಮಾನಿಟರ್‌ ಮಾಡುವುದು.


ನೀವು ದಿನ ನಿತ್ಯದ ಪ್ರತಿಯೊಂದು ಖರ್ಚುಗಳನ್ನು ಒಂದು ಪುಸ್ತಕದಲ್ಲಿ ಬರೆಯುತ್ತಾ ಹೋಗಿ. ಖರ್ಚು ಮಾಡಿದ ಮೊತ್ತ ಎಷ್ಟೇ ಆಗಿರಲಿ. ಬೇಕಿದ್ದರೆ ಇದಕ್ಕಾಗಿಯೇ ಮೊಬೈಲ್‌ ಅಪ್ಲಿಕೇಶನ್‌ಗಳು ಸಿಗುತ್ತವೆ. ಖರ್ಚು ಮತ್ತು ಉಳಿತಾಯವನ್ನು ನೋಟ್‌ ಮಾಡಿ ಇಟ್ಟುಕೊಳ್ಳುವುದು ನಿರ್ಣಾಯಕ.


ಹಣವನ್ನು ಎಷ್ಟು ಉಳಿಸಬೇಕು ಮತ್ತು ಎಷ್ಟು ಖರ್ಚು ಮಾಡಬೇಕು ಎಂಬುದು ಹಲವರಿಗೆ ಕಾಡುವ ಪ್ರಶ್ನೆಯಾಗಿರಬಹುದು. ಇದಕ್ಕಾಗಿ ಹಣಕಾಸು ಸಲಹೆಗಾರರು 50/30/20 ಎಂಬ ಸುಲಭ ಸೂತ್ರವನ್ನು ಜನಪ್ರಿಯಗೊಳಿಸಿದ್ದಾರೆ. ಮೊದಲಿಗೆ ನಿಮ್ಮ ಆದಾಯವನ್ನು ಮೂರು ಕೆಟಗರಿಗಳಲ್ಲಿ ಹಂಚಿಕೊಳ್ಳಿ. ಅವುಗಳೆಂದರೆ- ನಿಮ್ಮ ಅಗತ್ಯಗಳಿಗೆ (Needs), ನಿಮ್ಮ ಬಯಕೆಗಳಿಗೆ (Wants) ಮತ್ತು ಉಳಿತಾಯಕ್ಕೆ (Savings) ಆದಾಯ.


ಅಗತ್ಯ ಅಥವಾ ಅವಶ್ಯಕತೆಗಳಿಗೆ ನಿಮ್ಮ ಆದಾಯದ 50% ಪಾಲನ್ನು ಖರ್ಚು ಮಾಡಿರಿ. ದಿನಸಿ, ಬಟ್ಟೆ, ಮನೆ ಬಾಡಿಗೆ, ಸಣ್ಣ ಪುಟ್ಟ ಸಾಲಗಳು, ಆರೋಗ್ಯ ವೆಚ್ಚ ಇವೆಲ್ಲವು ಅಗತ್ಯಗಳು. ಆದಾಯದ 30% ಮೊತ್ತವನ್ನು ಬಯಕೆಗಳಿಗೆ (Wants) ಖರ್ಚು ಮಾಡಿರಿ. ಮನರಂಜನೆ, ವಿಹಾರ, ಹವ್ಯಾಸಗಳಿಗೆ ಬಳಸಿಕೊಳ್ಳಿ. ಆದರೆ ಆದಾಯದ 20% ಮೊತ್ತವನ್ನು ಕಡ್ಡಾಯವಾಗಿ ಉಳಿತಾಯಕ್ಕೆ (Savings) ತೆಗೆದಿರಿಸಿ.


ಹೀಗಿದ್ದರೂ, ಪ್ರತಿಯೊಬ್ಬರಿಗೂ ಇದೊಂದೇ ಸೂತ್ರ ಪಕ್ಕಾ ಅನ್ವಯವಾಗುತ್ತದೆ ಎಂದು ಹೇಳಲಾಗದು. ಇದು ನಿಮ್ಮ ಆದಾಯ, ವಾಸದ ಸ್ಥಳವನ್ನೂ ಆಧರಿಸಿರಬಹುದು. ಆದರೆ ನಿಮಗೆ ಎಷ್ಟು ಸಾಧ್ಯವೋ ಅಷ್ಟು ಉಳಿತಾಯಕ್ಕೆ ಆದ್ಯತೆ ನೀಡುವುದನ್ನು ಮರೆಯದಿರಿ. ಆದಾಯದ ನೂರಕ್ಕೆ ನೂರು ಖರ್ಚು ಸಮಂಜಸವಲ್ಲ. ಇಂತಹ ಸೂತ್ರವನ್ನು ಪ್ರತಿ ತಿಂಗಳೂ ತಪ್ಪದೆ ಅನುಸರಿಸುವುದರಿಂದ ನಿಮ್ಮ ಹಣಕಾಸು ವ್ಯವಸ್ಥೆ ಅಚ್ಚುಕಟ್ಟಾಗಿ, ಸಮತೋಲನದಿಂದ ಬೆಳೆಯಬಲ್ಲುದು.


ಬಿಲ್‌ಗಳನ್ನು ಮತ್ತು ಸಾಲಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದರಿಂದಲಾ ಸಾಕಷ್ಟು ಹಣ ಉಳಿತಾಯ ಮಾಡಬಹುದು. ಬಳಕೆಯಲ್ಲಿ ಇರದ ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಅನ್‌ ಪ್ಲಗ್‌ ಮಾಡುವುದು, ಎಲ್‌ಇಡಿ ಬಲ್ಬ್‌ಗಳ ಬಳಕೆ ಇತ್ಯಾದಿ ಸಣ್ಣ ಬದಲಾವಣೆಗಳನ್ನು ಮಾಡಬಹುದು. ಜತೆಗೆ ಸೋಲಾರ್‌ ಪವರ್‌ ಪ್ಯಾನೆಲ್‌ಗಳನ್ನು ಬಳಸಿಯೂ ಹಣ ಉಳಿತಾಯ ಮಾಡಬಹುದು. ಕೇಂದ್ರ ಸರ್ಕಾರ ಕೂಡ ಈ ನಿಟ್ಟಿನಲ್ಲಿ ಸೂರ್ಯ ಘರ್‌ ಎಂಬ ಉತ್ತಮ ಯೋಜನೆಯನ್ನು ಜಾರಿಗೊಳಿಸಿದೆ. ಭವಿಷ್ಯದ ದಿನಗಳಲ್ಲಿ ಸೌರ ಶಕ್ತಿಯ ಬಳಕೆ ದೇಶದಲ್ಲಿ ಮತ್ತಷ್ಟು ಜನಪ್ರಿಯವಾಗಲಿದೆ. ಐದು ಕಿಲೋ ವ್ಯಾಟ್‌ ರೂಫ್‌ ಟಾಪ್‌ ಸೋಲಾರ್‌ ಪ್ಯಾನೆಲ್‌ ಅಳವಡಿಸಿದರೂ ತಿಂಗಳಿಗೆ 600 ಯುನಿಟ್‌ ವಿದ್ಯುತ್‌ ಉಳಿತಾಯ ಮಾಡಬಹುದು. ಸೋಲಾರ್‌ ದ್ವಿ ಚಕ್ರ ವಾಹನವನ್ನೂ ರಿಚಾರ್ಜ್‌ ಮಾಡಬಹುದು. ಇದರಿಂದ ಪೆಟ್ರೋಲ್‌ಗೆ ಮಾಡುವ ಖರ್ಚನ್ನೂ ಉಳಿತಾಯ ಮಾಡಬಹುದು.


ನೀವು ಗೃಹ ಸಾಲ, ವಾಹನ ಸಾಲವನ್ನು ಹೊಂದಿರಬಹುದು. ಪ್ರತಿ ವರ್ಷ ಕನಿಷ್ಠ ಒಂದೆರಡು ಕಂತುಗಳನ್ನು ಹೆಚ್ಚುವರಿಯಾಗಿ ಮರು ಪಾವತಿಸಿದರೆ, ಬೇಗನೆ ಸಾಲ ಮುಗಿಯುವುದಲ್ಲದೆ, ಲಕ್ಷಾಂತರ ರೂ. ಉಳಿತಾಯವೂ ಸಾಧ್ಯವಾಗುತ್ತದೆ.


ಸೇವಿಂಗ್ಸ್‌ ಅಕೌಂಟ್‌ ಸ್ಟ್ರಾಟಜಿ


ಸೇವಿಂಗ್ಸ್‌ ಅಕೌಂಟ್‌ ಸ್ಟ್ರಾಟಜಿಗಳನ್ನೂ 2025ರಲ್ಲಿ ಮಾಡಬಹುದು. ಇದಕ್ಕಾಗಿ ಮೊದಲನೆಯದಾಗಿ ಹೆಚ್ಚು ಬಡ್ಡಿ ದರ ನೀಡುವ ಸೇವಿಂಗ್ಸ್‌ ಅಕೌಂಟ್‌ಗೆ ಬದಲಾಯಿಸಿಕೊಳ್ಳಿ. ಎರಡನೆಯದಾಗಿ ಮ್ಯೂಚುವಲ್‌ ಫಂಡ್‌ಗಳಲ್ಲಿ ಸಿಸ್ಟಮ್ಯಾಟಿಕ್‌ ಇನ್ವೆಸ್ಟ್‌ಮೆಂಟದ ಪ್ಲಾನ್‌ ಅಥವಾ ಸಿಪ್‌ ಮೂಲಕ ಪ್ರತಿ ತಿಂಗಳೂ ನಿಮ್ಮ ಕೈಲಾಗುವಷ್ಟು ಹೂಡಿಕೆ ಮಾಡಿ. ರಿಕರಿಂಗ್‌ ಡೆಪಾಸಿಟ್‌, ಸಾರ್ವಜನಿಕ ಭವಿಷ್ಯನಿಧಿ ಅಥವಾ ಪಿಪಿಎಫ್‌, ನ್ಯಾಶನಲ್‌ ಪೆನ್ಷನ್‌ ಸ್ಕೀಮ್‌ ಅಥವಾ ಎನ್‌ಪಿಎಸ್‌, ಸುಕನ್ಯಾ ಸಮೃದ್ಧಿ ಕೂಡ ನಿಯಮಿತ ಉಳಿತಾಯಕ್ಕೆ ಸಹಕರಿಸುತ್ತದೆ. ಅದು ನಿಮ್ಮ ಸ್ಯಾಲರಿ ಅಕೌಂಟ್‌ನಿಂದಲೇ ಟ್ರಾನ್ಸ್‌ಫರ್‌ ಆಗುವಂತೆ ಮಾಡಿಕೊಳ್ಳಿ. ಖರ್ಚಿಗೆ ಮುನ್ನ ಉಳಿತಾಯಕ್ಕೆ ಆದ್ಯತೆ ನೀಡಿ.

ಹಾಗಾದರೆ ಉಳಿತಾಯ ಏಕೆ ಮಾಡಬೇಕು? ಭವಿಷ್ಯದಲ್ಲಿ ಎಂದೋ ಒಂದು ದಿನ ಮಾಡುವ ಖರ್ಚನ್ನು ಈಗಲೇ ಮಾಡಿ ಎಂಜಾಯ್ ಮಾಡಬಹುದಲ್ಲವೇ ಎಂದು ಅನ್ನಿಸಬಹುದು. ಆದರೆ ಅದೇ ನಾವು ಮಾಡುವ ತಪ್ಪು. ಭವಿಷ್ಯದಲ್ಲಿ ಬರಬಹುದಾದ ಹಣಕಾಸು ವಿಪತ್ತುಗಳನ್ನು ಎದುರಿಸಲು ಎಮರ್ಜೆನ್ಸಿ ಫಂಡ್‌ ಅತ್ಯಂತ ಅಗತ್ಯ. ನಿವೃತ್ತಿಯ ಬದುಕಿಗೂ ಹೂಡಿಕೆ ಮಾಡುವುದು ಮುಖ್ಯ. ಮಕ್ಕಳ ಶಿಕ್ಷಣ, ಮದುವೆ, ಮನೆ, ಫಾರ್ಮ್‌ ಹೌಸ್‌, ಬಂಗಾರ, ಬೆಳ್ಳಿ, ವಾಹನ ಖರೀದಿಗೂ ದೊಡ್ಡ ಮತ್ತದ ಹಣ ಬೇಕಾಗುತ್ತದೆ. ಇದನ್ನೆಲ್ಲ ಹೊಂದಿಸಲು ಉಳಿತಾಯದ ಹವ್ಯಾಸವೇ ಮೊಟ್ಟ ಮೊದಲ ಹೆಜ್ಜೆ ಎಂಬುದನ್ನು ಮರೆಯಬಾರದು.