ಬಾಳೆಹಣ್ಣಿನ ಪಡ್ಡು ಸಿಹಿ-ಸಿಹಿಯಾಗಿ ತುಂಬಾನೇ ರುಚಿಯಾಗಿರುತ್ತದೆ, ಅಲ್ಲದೆ ಪಡ್ಡು ತಂಬಾ ಮೃದುವಾಗಿದ್ದು ಬಾಯಲ್ಲಿ ಇಟ್ಟರೆ ಕರಗುವಂತಿರುತ್ತದೆ, ಈ ಬಾಳೆಹಣ್ಣಿನ ಪಡ್ಡು ಮಾಡುವುದು ಸುಲಭದ ವಿಧಾನ ಅಲ್ಲದೆ ಇದನ್ನು ರೆಡಿ ಮಾಡಿ ವಾರದವರೆಗೆ ಇಡಬಹುದು, ಸಂಜೆ ಮಕ್ಕಳಿಗೆ ಇದನ್ನು ಮಾಡಿ ಕೊಟ್ಟರೆ ಚೆನ್ನಾಗಿರುವುದರಿಂದ ಇಷ್ಟಪಟ್ಟು ತಿಂತಾರೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:
Banana Paddu
ಬೇಕಾಗುವ ಸಾಮಗ್ರಿ
ಅಕ್ಕಿಹಿಟ್ಟು1 ಕಪ್
100 ಗ್ರಾಂ ಬೆಲ್ಲ
ಒಂದು ಕಪ್ ನೀರು
ಹಣ್ಣಾದ ಬಾಳೆಹಣ್ಣು 3
ಸ್ವಲ್ಪ ತೆಂಗಿನ ತುರಿ
2-3 ಚಮಚ ತುಪ್ಪ
ಸ್ವಲ್ಪ ರೋಸ್ಟ್ ಮಾಡಿದ ಬಿಳಿ ಎಳ್ಳು
1/2 ಚಮಚ ಏಲಕ್ಕಿ ಪುಡಿ
1/4 ಚಮಚ ಜೀರಿಗೆ ಪುಡಿ
ಮಾಡುವ ವಿಧಾನ
ನೀವು ಬೆಲ್ಲವನ್ನು ತುರಿಯಿರಿ, ಅದನ್ನು ಬೌಲ್‌ಗೆ ಹಾಕಿ, ಬೆಲ್ಲದ ಅಚ್ಚು ಬದಲಿಗೆ ಬೆಲ್ಲದ ಪುಡಿ ಬಳಸಬಹುದು
ನಂತರ ಬೌಲ್‌ಗೆ ಒಂದು ಕಪ್ ನೀರು ಹಾಕಿ ಕಲೆಸಿ
ನಂತರ ಕಾಯಿಸಿ ಬೆಲ್ಲದ ಪಾಕ ತಯಾರಿಸಿ
ಉರಿಂದ ಇಳಿಸಿ ತಣ್ಣಗಾಗಲು ಬಿಡಿ
ನಂತರ ಅಕ್ಕಿಹಿಟ್ಟು, ತೆಂಗಿನ ತುರಿ ಹಾಕಿ ಮಿಕ್ಸ್ ಮಾಡಿ
ಬಾಳೆಹಣ್ಣು ಮ್ಯಾಶ್ ಮಾಡಿ ಮಿಕ್ಸ್ ಮಾಡಿ, ಬಳಿಕ ತುಪ್ಪ ಸೇರಿಸಿ ಮಿಕ್ಸ್ ಮಾಡಿ. ಏಲಕ್ಕಿ ಪುಡಿ, ಜೀರಿಗೆ ಪುಡಿ ಸೇರಿಸಿ ಮಿಕ್ಸ್
ಈಗ ಪಡ್ಡು ತವಾಗೆ ತುಪ್ಪ ಸವರಿ ನಂತರ ಪಡ್ಡು ತವಾ ಬಿಸಿ ಮಾಡಿ ಅದರಲ್ಲಿ ಹಿಟ್ಟು ಹಾಕಿ ಬೇಯಸಿ.
ಇತರ ಸಲಹೆ: ಮೊದಲಿಗೆ ನೀರು ತುಂಬಾ ಹಾಕಬೇಡಿ, ಒಂದು ವೇಳೆ ಹಿಟ್ಟು ಗಟ್ಟಿಯಾದರೆ ನೀವು ನೀರುಸೇರಿಸಬಹುದು
ತೆಂಗಿನ ತುರಿ ಹಾಕಬಹುದು ಅಥವಾ ತೆಂಗಿನಕಾಯಿ ಕತ್ತರಿಸಿ ಅದನ್ನು ತುಪ್ಪದಲ್ಲಿ ಸ್ವಲ್ಪ ಹುರಿದು ನಂತರ ಸೇರಿಸಬಹುದು.
ಇದಕ್ಕೆ ಅಡುಗೆ ಸೋಡಾ ಬೇಕಾದರೆ ಸೇರಿಸಬಹುದು
ಬಾಳೆಹಣ್ಣು ತುಂಬಾ ಹಣ್ಣಾಗಿದ್ದರೆ ಇನ್ನೂ ರುಚಿ
ನೀವು ತವಾಗೆ ತುಪ್ಪಕ್ಕಿಂತ ಎಣ್ಣೆ ಸವರಿದರೆ ಅದು ಸುಲಭವಾಗಿ ಕಲ್ಲಿಂದ ತೆಗಿಯಬಹುದು, ಎರಡೂ ಬದಿ ಚೆನ್ನಾಗಿ ಬೇಯಿಸಿ.
ಇದಕ್ಕೆ ಬೇಕಿದ್ದರೆ ಡ್ರೈ ಫ್ರೂಟ್ಸ್ ಕೂಡ ಸೇರಿಸಬಹುದು, ಒಣ ಅಂಜೂರ, ಪಿಸ್ತಾ, ಗೋಡಂಬಿ ಇವುಗಳನ್ನು ಸೇರಿಸಬಹುದು.
ನೀವು ಈ ಪಡ್ಡು ಮಾಡಿ ವಾರದವರೆಗೆ ಇಡಬಹುದು
ಮಕ್ಕಳಿಗೆ ಈ ಪಡ್ಡು ಮಾಡಿ ನೀಡುವುದರಿಂದ ಅವರು ಇಷ್ಟಪಟ್ಟು ತಿಂತಾರೆ, ಪೋಷಕಾಂಶದ ಆಹಾರ ಹೊಟ್ಟೆ ಸೇರುತ್ತದೆ.
ಮಧುಮೇಹಿಗಳು ಈ ಪಡ್ಡು ಬೆಲ್ಲ ಸ್ಕಿಪ್ ಮಾಡಿ ಅಥವಾ ಸ್ವಲ್ಪವೇ ಬೆಲ್ಲ ಸೇರಿಸಿ ಮಾಡಿ ಸವಿಯಬಹುದು. ಈ ಪಡ್ಡು ಮಿತಿಯಲ್ಲಿ ತಿಂದರೆ ಯಾವುದೇ ತೊಂದರೆಯಿಲ್ಲ.
[ of 5 - Users]
No comments:
Post a Comment