Followers

Followers somaling m uppar

Wednesday, January 1, 2025

ಏಲಕ್ಕಿ ನೀರು


ಏಲಕ್ಕಿ ಒಂದು ವಿಶೇಷವಾದ ಪರಿಮಳ ಹೊಂದಿರುವ ಸಾಂಬಾರ ವಸ್ತು ಆಗಿದೆ ಸಾಮಾನ್ಯವಾಗಿ ಪಾಯಸದಂತಹ ಸ್ವೀಟ್ ತಯಾರಿಕೆಯಲ್ಲಿ ವಿಶೇಷ ಪರಿಮಳಕ್ಕಾಗಿ ಏಲಕ್ಕಿಯನ್ನು ಬಳಸುತ್ತಾರೆ ಏಲಕ್ಕಿ ಕುಟ್ಟಿ ಪುಡಿ ಮಾಡಿ ಸ್ವೀಟ್ ಗಳಿಗೆ ಹಾಕಿದ್ರೆ ಅದಕ್ಕೆ ವಿಶೇಷವಾದ ಟೇಸ್ಟ್ ಬರುತ್ತೆ ಎಂದೇ ಹೇಳಬಹುದು ಆದರೆ ಇವತ್ತು ಸ್ವೀಟ್ ಅಲ್ಲ ಅದರ ಬದಲು ಏಲಕ್ಕಿ ಸೇವನೆಯಿಂದ ಆಗುವ ಬೆನಿಫಿಟ್ ಬಗ್ಗೆ ಇಲ್ಲಿದೆ ಮಾಹಿತಿ.

ಜೀರ್ಣಕ್ರಿಯೆಗೆ ಸಹಾಯಕ

ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಏಲಕ್ಕಿ ನೆನೆಸಿಟ್ಟ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಇದರಿಂದ ಜೀರ್ಣಕ್ರಿಯೆ ಸುಲಭವಾಗಿ ಆಗುತ್ತದೆ ಅಷ್ಟೇ ಅಲ್ಲದೆ ಹೊಟ್ಟೆ ಉಬ್ಬರ ಮಲಬದ್ಧತೆ ಯಾಸಿಡಿಟಿ ಎಂತಹ ಸಮಸ್ಯೆಗಳು ನಿಮ್ಮ ಹತ್ತಿರವು ಸುಳಿಯುವುದಿಲ್ಲ. ರಾತ್ರಿ ಏಲಕ್ಕಿ ನೆನೆಸಿಟ್ಟು ಬೆಳಿಗ್ಗೆ ಆ ನೀರನ್ನು ಕುಡಿಯುವುದು ಒಳ್ಳೆಯದು.

ಇದನ್ನು ಡಿಟಾಕ್ಸ್ ಪಾನೀಯವಾಗಿದೆ

ಸಮಯದಲ್ಲಿ ಇರುವ ವಿಷಕಾರಕ ಅಂಶವನ್ನು ತೆಗೆದುಹಾಕಲು ಏಲಕ್ಕಿ ನೀರು ಬಹಳ ಪ್ರಯೋಜನಕಾರಿಯಾಗಿದೆ ಇದು ಮೂತ್ರವರ್ಧಕ ಗುಣವನ್ನು ಹೊಂದಿರುವುದರಿಂದ ದೇಹದಲ್ಲಿ ಇರುವ ವಿಷ ದ್ರವ್ಯವನ್ನು ಹೊರಹಾಕಲು ಸಹಾಯ ಮಾಡುತ್ತದೆ ಹಾಗಾಗಿ ದೇಹ ಆರೋಗ್ಯಕರವಾಗಿ ಇರುವಂತೆ ನೋಡಿಕೊಳ್ಳುತ್ತದೆ.

ಬಾಯಿಯ ಕೆಟ್ಟ ವಾಸನೆ ಹೋಗಲಾಡಿಸಲು

ಕೆಲವರಿಗೆ ದಿನಕ್ಕೆ ಎರಡು ಬಾರಿ ಹಲ್ಲುಜ್ಜಿದರೂ ಕೂಡ ಬಾಯಿಯಿಂದ ಕೆಟ್ಟ ವಾಸನೆ ಬರುತ್ತಿರುತ್ತದೆ. ಇದನ್ನ ಹೋಗಲಾಡಿಸಲು ಒಂದು ಅತ್ಯುತ್ತಮ ಮನೆ ಮದ್ದು ಅಂದರೆ ಅದು ಏಲಕ್ಕಿ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಹಾಗೂ ಆಂಟಿ ಫಂಗಲ್ ಗುಣಲಕ್ಷಣ ಇರುವುದರಿಂದ ಬಾಯಿಯ ದುರ್ಗಂಧವನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಪ್ರತಿದಿನ ಏಲಕ್ಕಿ ನೀರನ್ನು ಸೇವನೆ ಮಾಡಬಹುದು ಅಥವಾ ಏಲಕ್ಕಿ ಕಾಳುಗಳನ್ನು ಬಾಯಲ್ಲಿ ಇಟ್ಟು ಜಗಿದು ಅದರ ನೀರನ್ನು ಕುಡಿಯುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ.

ಚರ್ಮದ ಆರೋಗ್ಯಕ್ಕೂ ಒಳ್ಳೆಯದು!

ಸಾಮಾನ್ಯವಾಗಿ ಚಳಿಗಾಲದಲ್ಲಿ ದೇಹ ಕಾಂತಿಯನ್ನು ಕಳೆದುಕೊಳ್ಳುತ್ತದೆ ಚರ್ಮ ಸುಕ್ಕುಗಟ್ಟಿದಂತೆ ಆಗುತ್ತದೆ. ಆದರೆ ಉತ್ಕರ್ಷಣ ನಿರೋಧಕ ಅಂಶ ಹೊಂದಿರುವ ಏಲಕ್ಕಿ ನೀರಿನ ಸೇವನೆ ಚರ್ಮವನ್ನು ಪುನಶ್ಚೇತನ ಗೊಳಿಸುತ್ತದೆ ಚರ್ಮಕ್ಕೆ ಹೊಸ ಕಾಂತಿಯನ್ನು ಒದಗಿಸುತ್ತದೆ.

ಮುಟ್ಟಿನ ನೋವಿಗೆ ರಾಮಬಾಣ

ಪ್ರತಿ ಹೆಣ್ಣು ಮಕ್ಕಳು ಪ್ರತಿ ತಿಂಗಳು ಅನುಭವಿಸಲೇಬೇಕಾದ ಪಿರಿಯಡ್ಸ್ ಸಮಸ್ಯೆಯಿಂದ ಸ್ವಲ್ಪಮಟ್ಟಿಗೆ ಆದರೂ ಪರಿಹಾರ ಕಂಡುಕೊಳ್ಳಬೇಕು ಅಂದರೆ ಏಲಕ್ಕಿ ನೀರು ಸೇವನೆ ಒಳ್ಳೆಯದು. ಕೆಲವರಿಗೆ ಪ್ರತಿ ತಿಂಗಳು ಮುಟ್ಟಿನ ಸಂದರ್ಭದಲ್ಲಿ ಸೆಳೆತ ಉಂಟಾಗುತ್ತದೆ. ದೇಹದಲ್ಲಿ ನಿ:ಶಕ್ತಿ ಕಾಣಿಸಿಕೊಳ್ಳುತ್ತದೆ ಹಾರ್ಮೋನ್ ಅಸಮತೋಲನದಿಂದ ದೇಹ ಹೆಚ್ಚು ಸುಸ್ತಾದ ಅನುಭವವಾಗುತ್ತದೆ. ಇಂತಹ ಸಂದರ್ಭದಲ್ಲಿ ಆಂಟಿಸ್ಪಾಸ್ಮೊಡಿಕ್ ಗುಣವಿರುವ ಏಲಕ್ಕಿ ನೀರನ್ನ ಸೇವನೆ ಮಾಡುವುದರಿಂದ ದೇಹ ನಿರಾಳವಾಗುತ್ತದೆ. ಹಾಗಾಗಿ ಮುಟ್ಟಿನ ಸಮಯದಲ್ಲಿ ಮಹಿಳೆಯರು ಏಲಕ್ಕಿ ನೀರು ಸೇವನೆ ಹೆಚ್ಚಾಗಿ ಮಾಡುವುದು ಒಳ್ಳೆಯದು.

ರಕ್ತದ ಒತ್ತಡ ಕಡಿಮೆ ಮಾಡುತ್ತದೆ

ಅಧಿಕ ರಕ್ತದೊತ್ತಡ ಕಾಡುತ್ತಿರುವವರು ಈ ಪಾನೀಯವನ್ನು ಬೆಳಿಗ್ಗೆ ಸೇವನೆ ಮಾಡುವುದು ಬಹಳ ಒಳ್ಳೆಯದು ಏಲಕ್ಕಿ ನೀರನ್ನ ಸೇವನೆ ಮಾಡುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ ನಿರಂತರವಾಗಿ ಏಳಕ್ಕೆ ನೀರು ಸೇವನೆ ಮಾಡುತ್ತಾ ಬಂದರೆ ಕೆಲವೇ ದಿನಗಳಲ್ಲಿ ಇದರ ಪರಿಣಾಮವನ್ನು ನೀವೇ ಕಾಣುತ್ತೀರಿ.

ತೂಕ ಇಳಿಕೆಗೆ ಸಹಾಯಕ

ಇವು ತೂಕ ಇಳಿಕೆಗೆ ಏನೇನೋ ಸರ್ಕಸ್ ಮಾಡುತ್ತಿದ್ದರೆ, ಅಜೀರ್ಣ ಸಮಸ್ಯೆ ಹೋಗಲಾಡಿಸಿ ಸುಲಭವಾಗಿ ಜೀರ್ಣವಾಗುವಂತೆ ಮಾಡಿ ನಿಮ್ಮ ಹೊಟ್ಟೆಯ ಭಾಗದ ಬೊಜ್ಜು ನಿವಾರಣೆಗೂ ಕೂಡ ಸಹಾಯವಾಗಲು ಏಲಕ್ಕಿ ನೀರು ಸೇವನೆ ಬಹಳ ಒಳ್ಳೆಯದು. ಇದು ಚಯಾಪಚಯ ಕ್ರಿಯೆಯನ್ನು ವೃದ್ಧಿಸುತ್ತದೆ ಆರೋಗ್ಯಕರ ಜೀವನ ನಡೆಸಲು ಸಹಾಯ ಮಾಡುತ್ತದೆ. ಏಲಕ್ಕಿಯಲ್ಲಿ ಮಿಲಟೋನಿನ್ ಅಂಶವಿದ್ದು ಇದು ದೇಹದ ಕೊಬ್ಬು ಕರಗಿಸುವಿಕೆಗೆ ಸಹಾಯ ಮಾಡುತ್ತದೆ.

ಏಲಕ್ಕಿ ನೀರು ತಯಾರಿಸುವುದು ಹೇಗೆ?

ಕೆಲವು ಏಲಕ್ಕಿ ಬೀಜಗಳನ್ನು ನೀರಿನಲ್ಲಿ ಹಾಕಿ ನೆನೆ ಇಡಬಹುದು ಅಥವಾ ಏಲಕ್ಕಿಯನ್ನು ಜಜ್ಜಿಕೊಂಡು ಅದರ ಬೀಜವನ್ನು ತೆಗೆಯಬೇಕು ಈಗ ಸಿಪ್ಪೆ ಹಾಗೂ ಬೀಜ ಎರಡನ್ನು ಕೂಡ ಒಂದು ಲೋಟ ನೀರಿಗೆ ಹಾಕಿ ರಾತ್ರಿ ಇಡಿ ನೆನೆ ಇಡಬೇಕು. ಅಥವಾ ಏಲಕ್ಕಿ ಬೀಜವನ್ನು ಮಾತ್ರ ನೀರಿಗೆ ಹಾಕಲು ಬಹುದು. ಈ ರೀತಿ ನೆನೆ ಇಟ್ಟು ನೀರನ್ನು ಪ್ರತಿದಿನ ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಬೇಕು. ಇದರ ಜೊತೆಗೆ ನೀವು ಆರೋಗ್ಯಕರ ಜೀವನವನ್ನು ರೂಡಿಸಿಕೊಳ್ಳುತ್ತಾ ಬಂದರೆ ಖಂಡಿತವಾಗಿಯೂ ತೂಕ ಹೇಳಿಕೆ ಮಾತ್ರವಲ್ಲದೆ ನಿಮ್ಮ ದೇಹದ ಆರೋಗ್ಯ ಹಾಗೂ ಮಾನಸಿಕ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ.

ಅರೋಗ್ಯ & ಜೀವನ ಶೈಲಿ

No comments:

Post a Comment