Followers

Followers somaling m uppar

Wednesday, May 21, 2025

Home


ಫಲಾನುಭವಿಗಳಾಗಲು ವಸತಿ ರಹಿತರಾಗಿರಬೇಕು. ಬಳ್ಳಾರಿ ನಗರದ ನಿವಾಸಿಗಳಾಗಿರಬೇಕು. ವಾರ್ಷಿಕ ಆದಾಯ ರೂ.3 ಲಕ್ಷ ಮೀರಿರಬಾರದು. ಫಲಾನುಭವಿ ವಂತಿಕೆ ಪಾವತಿಸುವುದು ಹಾಗೂ ಬ್ಯಾಂಕ್ ಸಾಲ ಮರುಪಾವತಿ ಮಾಡಲು ಬದ್ದರಾಗಿರಬೇಕು.

*ಫಲಾನುಭವಿಯು ಭರಿಸಬೇಕಾದ ವಂತಿಕೆ ಮೊತ್ತದ ವಿವರ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ:
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ-3,30,000 ರೂ., ಫಲಾನುಭವಿಯು ಪ್ರಸುತ್ತ ಪಾವತಿಸಬೇಕಾದ ವಂತಿಕೆ ಮೊತ್ತ-42,000 ರೂ., ಫಲಾನುಭವಿಯು ಮನೆ ಸ್ವಾಧೀನ ಸಂದರ್ಭದಲ್ಲಿ ಪಾವತಿಸಬೇಕಾದ ವಂತಿಕೆ ಮೊತ್ತ-2,90,000 ರೂ., ಒಟ್ಟು ಘಟಕ ವೆಚ್ಚ (ಪರಿಷ್ಕೃತ)- 6,62,000 ರೂ.

ಅಲ್ಪ ಸಂಖ್ಯಾತ ಮತ್ತು ಇತರೆ

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಾಯಧನ-2,70,000 ರೂ., ಫಲಾನುಭವಿಯು ಪ್ರಸುತ್ತ ಪಾವತಿಸಬೇಕಾದ ವಂತಿಕೆ ಮೊತ್ತ-1,02,000 ರೂ., ಫಲಾನುಭವಿಯು ಮನೆ ಸ್ವಾಧೀನ ಸಂದರ್ಭದಲ್ಲಿ ಪಾವತಿಸಬೇಕಾದ ವಂತಿಕೆ ಮೊತ್ತ-2,90,000 ರೂ., ಒಟ್ಟು ಘಟಕ ವೆಚ್ಚ (ಪರಿಷ್ಕೃತ)- 6,62,000 ರೂ. ಪಾವತಿಸಬೇಕು.

ಈ ಮೇಲ್ಕಂಡ ಅರ್ಹತೆಯ ಮಾನದಂಡ ಹಾಗೂ ಫಲಾನುಭವಿ ವಂತಿಕೆ ಪಾವತಿಸಲು ಶಕ್ತರಾಗಿರುವ ಹಾಗೂ ಆಸಕ್ತಿ ಹೊಂದಿರುವ ಕುಟುಂಬಗಳು ಕೂಡಲೇ ನಿಗಧಿತ ನಮೂನೆಯ ಅರ್ಜಿ ಪಡೆದು ಅವಶ್ಯಕ ಹಾಗೂ ಅಗತ್ಯ ದಾಖಲೆಗಳೊಂದಿಗೆ ಮಹಾನಗರ ಪಾಲಿಕೆಯ ಹಳೆಯ ಕಚೇರಿಯ ಆಶ್ರಯ ಶಾಖೆಗೆ ಭೇಟಿ ನೀಡಬಹುದು ಎಂದು ಮಹಾನಗರ ಪಾಲಿಕೆ ಕಚೇರಿಯು ಪ್ರಕಟಣೆಯಲ್ಲಿ ತಿಳಿಸಿದೆ.

No comments:

Post a Comment