ಆರೋಗ್ಯದ ಬಗ್ಗೆ ಕಾಳಜಿ ಇರುವ ಬಹುತೇಕರು ಮೊಳಕೆ ಬರಿಸಿದ ಹೆಸರು ಕಾಳುಗಳನ್ನು ತಿನ್ನುವ ಅಭ್ಯಾಸವನ್ನು ಇತ್ತೀಚೆಗೆ ಹೆಚ್ಚಾಗಿ ರೂಢಿಸಿಕೊಂಡಿದ್ದಾರೆ. ಈ ಮೊಳಕೆ ಕಾಳಿನಲ್ಲಿರುವ ಎಲ್ಲ ರೀತಿಯ ಪೋಷಕಾಂಶಗಳು ಹಲವು ರೋಗಗಳನ್ನು ಬರದಂತೆ ತಡೆಯುತ್ತವೆ. ಇಲ್ಲಿ ಮೊಳಕೆ ಕಾಳು ತಿನ್ನುವುದರಿಂದ ನಿಮ್ಮ ಹತ್ತಿರವೂ ಸುಳಿಯದ 10 ರೋಗಗಳ ಮಾಹಿತಿಯನ್ನು ನಾವಿಲ್ಲಿ ನೀಡುತ್ತಿದ್ದೇವೆ.
ಚರ್ಮದ ಸಮಸ್ಯೆ: ಈ ಮೊಳಕೆ ಬರಿಸಿದ ಹೆಸರು ಕಾಳಿನಲ್ಲಿರುವ ಆಂಟಿಯೊಕ್ಸಿಂಡೆಂಟ್‌ಗಳು ಹಾಗೂ ವಿಟಾಮಿನ್‌ಗಳು ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತವೆ. ಇದರಿಂದ ಚರ್ಮದ ಸಮಸ್ಯೆ ನಿಮ್ಮ ಹತ್ತಿರವೂ ಸುಳಿಯುವುದಿಲ್ಲ,
ಮೂಳೆಯ ಆರೋಗ್ಯ: ಈ ಮೊಳಕೆ ಕಾಳಿನಲ್ಲಿರುವ ಕ್ಯಾಲ್ಸಿಯಂ ಹಾಗೂ ಮ್ಯಾಗ್ನೇಷಿಯಂ ಅಂಶಗಳು ನಿಮ್ಮ ಮೂಳೆಯನ್ನು ಬಲಗೊಳಿಸುತ್ತವೆ.
ಕ್ಯಾನ್ಸರ್: ಮೊಳಕೆಯೊಡೆದ ಹೆಸರು ಕಾಳಿನಲ್ಲಿರುವ ಫೈಟೊಕೆಮಿಕಲ್‌ಗಳು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.
ರಕ್ತಹೀನತೆ ಅಥವಾ ಅನೀಮಿಯಾ: ಹೆಸರು ಕಾಳಿನ ಮೊಳಕೆ ಕಾಳುಗಳು ಕಬ್ಬಿಣಾಂಶ ಮತ್ತು ಫೋಲಿಕ್ ಆಮ್ಲವನ್ನು ಹೇರಳವಾಗಿ ಹೊಂದಿದೆ. ಇದು ರಕ್ತಹೀನತೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಒತ್ತಡ ಮತ್ತು ಆತಂಕ: ಹಾಗೆಯೇ ಈ ಕಾಳುಗಳು ಇದು ನರಮಂಡಲವನ್ನು ಶಮನಗೊಳಿಸುವ ಪೋಷಕಾಂಶಗಳನ್ನು ಹೊಂದಿದ್ದು, ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹೃದ್ರೋಗ: ಹೆಚ್ಚಿನ ಫೈಬರ್ ಮತ್ತು ಉತ್ಕರ್ಷಣ ನಿರೋಧಕಗಳೊಂದಿಗೆ, ಮೊಳಕೆಯೊಡೆದ ಹೆಸರು ಕಾಳುಗಳು ಹೃದಯದ ಆರೋಗ್ಯವನ್ನು ಚೆನ್ನಾಗಿರಿಸುತ್ತದೆ. ಮತ್ತು ಹೃದಯ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಮಧುಮೇಹ: ಕಾಳಿನಲ್ಲಿರುವ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಹೀಗಾಗಿ ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.
ಜೀರ್ಣಕಾರಿ ಸಮಸ್ಯೆಗಳು: ಇದರಲ್ಲಿರುವ ಹೆಚ್ಚಿನ ಫೈಬರ್ ಅಂಶವು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ, ಜೀರ್ಣಾಂಗವನ್ನು ಸ್ವಚ್ಛವಾಗಿರಿಸುತ್ತದೆ.
ತೂಕ ನಿರ್ವಹಣೆ: ಈ ಕಾಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಹೆಚ್ಚಿನ ಪ್ರೊಟೀನ್‌ಗಳನ್ನು ಹೊಂದಿದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಆದ್ದರಿಂದ, ಇದನ್ನು ನಿಮ್ಮ ಆಹಾರದಲ್ಲಿ ದಿನವೂ ಬಳಕೆ ಮಾಡಿ.
No comments:
Post a Comment